ಬಸವ ಪರಂಪರೆ ಮುನ್ನಡೆಸುತ್ತಿರುವ ಸಾಮರಸ್ಯದ ಸಮಾಜೋತ್ಸವ: ಡಾ.ಶಿವರಾಜ ಪಾಟೀಲಭಾರತ ವಿಶ್ವದಲ್ಲೇ ಯಶಸ್ವಿ ಪ್ರಜಾಪ್ರಭುತ್ವ ದೇಶ. ೭೫ ವರ್ಷಗಳಿಂದ ಸಂವಿಧಾನಾತ್ಮಕಾಗಿ ಸಾಮಾಜಿಕ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಇದಕ್ಕೆ ಬಸವಾದಿ ಶಿವಶರಣರು ನೀಡಿರುವ ಸಮಾನತೆ, ಭಾತೃತ್ವ, ಐಕ್ಯತೆಯ ಸಂದೇಶವೇ ಕಾರಣ. ಮೊಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾಡುತ್ತಿರುವ ಸಾಮರಸ್ಯದ ಸಮಾಜೋತ್ಸವ ಕಾರ್ಯಕ್ರಮ ಬಸವ ಪರಂಪರೆ ಮುನ್ನಡೆಸುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ ಹೇಳಿದರು.