ಪಾಲಿಕೆ ಬಜೆಟ್‌ನಲ್ಲಿ ಸಾರ್ವಜನಿಕರ ಸಲಹೆಗೆ ಆದ್ಯತೆ ಕೊಡಿ: ವಿಜಯ ಮೋರೆಬೆಳಗಾವಿ ಮಹಾನಗರ ಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್ ಮಂಡನೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಪ್ರತಿ ವರ್ಷ ಸಲಹೆ, ಸೂಚನೆ ಪಡೆಯಲಾಗುತ್ತದೆ. ಆದರೆ, ಸಾರ್ವಜನಿಕರ ಸೂಕ್ತ ಸಲಹೆಗಳನ್ನು ಪಾಲಿಕೆ ಬಜೆಟ್‌ನಲ್ಲಿ ಆದ್ಯತೆ ನೀಡುತ್ತಿಲ್ಲ. ಈ ಬಾರಿಯಾದರೂ ಸಾರ್ವಜನಿಕರ ಸೂಕ್ತ ಸಲಹೆಗಳಿಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು ಎಂದು ಮಾಜಿ ಮೇಯರ್ ವಿಜಯ ಮೋರೆ ಆಗ್ರಹಿಸಿದರು.