ಶಾಸಕ ಅಭಯ ಪಾಟೀಲ ವಿರುದ್ಧ ದೂರು ದಾಖಲಿಸಲು ಕರವೇ ನಿರ್ಧಾರಕರ್ನಾಟಕ ಸರ್ಕಾರದ ಅನುದಾನ ಖರ್ಚು ಮಾಡಿ, ಕನ್ನಡದ ನೆಲದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ ಮೂರ್ತಿ ನಿರ್ಮಿಸಿ, ಕನ್ನಡ ನೆಲದ ಗಣ್ಯರನ್ನು ಕಡೆಗಣಿಸಿ ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮಹಾರಾಜರ ವಂಶಜ ಶಿವೇಂದ್ರರಾಜೆ ಭೋಸಲೆ ಅವರನ್ನು ಕರೆಯಿಸಿ ನಾಡವಿರೋಧಿ ಘೋಷಣೆ ಕೂಗಿಸಿ ಕನ್ನಡಿಗರನ್ನು ಅವಮಾನಿಸಿದ ಕಾರ್ಯಕ್ರಮದ ಆಯೋಜಕ ಶಾಸಕ ಅಭಯ ಪಾಟೀಲ ವಿರುದ್ಧ ನಾಡದ್ರೋಹ ದೂರು ದಾಖಲಿಸಲು ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿದೆ ಎಂದು ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ತಿಳಿಸಿದ್ದಾರೆ.