ಚನ್ನಮ್ಮನವರ 196ನೇ ಸ್ಮರಣೋತ್ಸವಕ್ಕೆ ಆಗ್ರಹವೀರರಾಣಿ ಕಿತ್ತೂರು ಚನ್ನಮ್ಮನವರ 196ನೇ ಸ್ಮರಣೋತ್ಸವವನ್ನು ಫೆ.02 ರಂದು ಬೈಲಹೊಂಗಲದಲ್ಲಿರುವ ಚನ್ನಮ್ಮಾಜಿ ಐಕ್ಯಸ್ಥಳದಲ್ಲಿ ಅರ್ಥಪೂರ್ಣವಾಗಿ ಸರ್ಕಾರದಿಂದ ಆಚರಿಸುವಂತೆ ಆಗ್ರಹಿಸಿ ವೀರರಾಣಿ ಕಿತ್ತೂರ ಚನ್ನಮ್ಮನ ಸ್ಮರಣೋತ್ಸವ ಸಮಿತಿ, ರಾಜಕೀಯ ಮುಖಂಡರು, ವಿವಿಧ ಸಂಘಟನೆ, ಸಮಾಜದ ಪದಾಧಿಕಾರಿಗಳು ಪಕ್ಷ ಮತ್ತು ಜಾತಿ ಬೇಧವಿಲ್ಲದೇ ಚನ್ನಮ್ಮನವರ ನೂರಾರು ಅಭಿಮಾನಿಗಳು ಉಪವಿಭಾಗಧಿಕಾರಿಗಳ ಮೂಲಕ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಗೆ ಚನ್ನಮ್ಮನ ಐಕ್ಯಸ್ಥಳದಲ್ಲಿ ಮನವಿಪತ್ರ ನೀಡಿ ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದರು.