ಅಪರಾಧ ನಿಯಂತ್ರಣಕ್ಕೆ ಕಾನೂನು ತಿಳಿವಳಿಕೆ ಪೂರಕದೊಡ್ಡಬಳ್ಳಾಪುರ: ವಿದ್ಯಾರ್ಥಿಗಳು ಸರಳ ಕಾನೂನುಗಳ ಕುರಿತಾಗಿ ತಿಳಿವಳಿಕೆ ಹೊಂದುವುದು ಮುಖ್ಯ. ಏಕೆಂದರೆ ವಿದ್ಯಾರ್ಥಿಗಳಿಗೆ ಅರಿವಿಲ್ಲದೆ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಆದರೆ, ಅದು ಅಪರಾಧ ಎಂದು ತಿಳಿದಿರುವುದಿಲ್ಲ. ಕಾನೂನು ತಿಳಿವಳಿಕೆ ಇದ್ದರೆ ಅಪರಾಧಗಳನ್ನು ನಿಗ್ರಹಿಸಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬೋಲಾ ಪಂಡಿತ್ ಹೇಳಿದರು.