ನೆಲಮಂಗಲಕ್ಕೆ ಸಂಸ್ಕರಿಸಿದ ವೃಷಭಾವತಿ ನೀರು ಮಾತ್ರ ಪೂರೈಕೆದಾಬಸ್ಪೇಟೆ: ವೃಷಭಾವತಿಯಿಂದ ಸಂಸ್ಕರಿಸಿದ ಶುದ್ಧೀಕರಣದ ನೀರು ಮಾತ್ರ ನೆಲಮಂಗಲಕ್ಕೆ ಬರುವುದು, ಈ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ. ರಾಜಕೀಯಕ್ಕಾಗಿ ಹಣ ಪಡೆದು ವಿರೋಧ ಮಾಡುವವರಿಗೆ ಉತ್ತರ ನೀಡುವ ಅಗತ್ಯವಿಲ್ಲ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.