ಟಿಎಂಸಿ ಬ್ಯಾಂಕ್ ಡಿಜಿಟಲೀಕರಣಕ್ಕೆ ಒತ್ತುದೊಡ್ಡಬಳ್ಳಾಪುರ: ಟಿಎಂಸಿ ಬ್ಯಾಂಕ್ 60 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಬ್ಯಾಂಕಿನ ಡಿಜಿಟಲೀಕರಣ ಮಾಡಲು ಒತ್ತು ನೀಡಲಾಗುತ್ತಿದ್ದು, ನವೆಂಬರ್ ವೇಳೆಗೆ ಯುಪಿಐ ಪಾವತಿ, ಕೋರ್ ಬ್ಯಾಂಕಿಂಗ್ ಮೊದಲಾದ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಕೆ.ಪಿ.ವಾಸುದೇವ್ ಹೇಳಿದರು.