ಪ್ರಕೃತಿ ಮೇಲಿನ ದಬ್ಬಾಳಿಕೆ ಮನುಕುಲಕ್ಕೆ ಮಾರಕದೊಡ್ಡಬಳ್ಳಾಪುರ: ಪ್ರಕೃತಿಯ ಮೇಲೆ ಮನುಷ್ಯನ ದಾಳಿ, ಅಸಹಜ ಜೀವನ ಕ್ರಮಗಳಿಂದಾಗಿ ಇಂದು ಜಗತ್ತಿನಲ್ಲಿ ಹಲವಾರು ವಿಸ್ಮಯಗಳನ್ನು ಕಾಣುತ್ತಿದ್ದೇವೆ. ಈ ಜಗತ್ತಿನಲ್ಲಿ ನಾವು ನಿರೀಕ್ಷಿಸಲಾಗದ ಬದಲಾವಣೆಗಳು ಸಂಭವಿಸಲಿದ್ದು, ಯುದ್ದ ಹಾಗೂ ವೈರಸ್‌ಗಳ ದಾಳಿ ಮನುಕುಲವನ್ನು ವಿನಾಶದತ್ತ ಕೊಂಡೊಯ್ಯಲಿದೆ ಎಂದು ಪರಿಸರವಾದಿ, ವಿಚಿತ್ರ ವಿಸ್ಮಯಗಳ ಸಂಗ್ರಹಕಾರ ಕೆ.ಗುರುದೇವ್ ತಿಳಿಸಿದರು.