ಕೃಷಿಯಲ್ಲಿ ಆಹಾರೋತ್ಪಾದನೆ ಹೆಚ್ಚಿಸಲು ರಸಗೊಬ್ಬರ, ಕೀಟ ನಾಶಕ ಅಧಿಕವಾಗಿ ಬಳಸುತ್ತಿರುವುದು ಆತಂಕಕಾರಿಯಾಗಿದ್ದು, ಇದರಿಂದ ಮಣ್ಣು, ನೀರು, ಪರಿಸರ ಕಲುಷಿತಗೊಳ್ಳುವುದರ ಜೊತೆಗೆ ಮಾನವರ ಆರೋಗ್ಯದ ಪರಿಣಾಮ ಉಂಟಾಗಲಿದೆ. ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು ಎಂದು ರಾಜ್ಯಪಾಲ ಗೆಹಲೋತ್ ಕರೆ ನೀಡಿದರು.
ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯ ಗಣಪತಿನಗರದ ರಸ್ತೆಯಿಂದ ತಮ್ಮೇನಹಳ್ಳಿ ಕಡೆಗೆ ಹೋಗುವ ಅಂದಾನಪ್ಪ ಲೇಔಟ್ ರಸ್ತೆ ಮಣ್ಣು, ಧೂಳಿನಿಂದ ಗುಂಡಿಮಯವಾಗಿತ್ತು. ಜನರು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುತ್ತಿದ್ದರು. ಕೊನೆಗೂ ಎಚ್ಚೆತ್ತ ಕಾಂಕ್ರೀಟ್ ರಸ್ತೆ ಮಾಡಿದೆ.