ಬೆಂಗಳೂರು ಜಿಲ್ಲೆಯಲ್ಲಿ 98.43 ಲಕ್ಷ ಮತದಾರರುಕಳೆದ ಅಕ್ಟೋಬರ್ 27ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ 97.90 ಲಕ್ಷ ಮತದಾರರಿದ್ದರು. ನಂತರ ಹೆಚ್ಚುವರಿಯಾಗಿ 53 ಸಾವಿರ ಮತದಾರರು ಸೇರ್ಪಡೆಗೊಂಡಿದ್ದು, ಅಂತಿಮವಾಗಿ ನಗರ ಜಿಲ್ಲೆ ವ್ಯಾಪ್ತಿಯಲ್ಲಿ 98.43 ಲಕ್ಷ ಮತದಾರರಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.