ಆಂಜನೇಯನ ಶಕ್ತಿ, ಶ್ರೀರಾಮನ ಭಕ್ತಿಯಿಂದ ಬದುಕು ಪಾವನಹೊಸಕೋಟೆ: ಉತ್ತರ ಭಾರತದಲ್ಲಿ ಶ್ರೀರಾಮನ ಆರಾಧನೆ, ದಕ್ಷಿಣ ಭಾರತದಲ್ಲಿ ಆಂಜನೇಯನ ಆರಾಧನೆ ಮಾಡಲಾಗುತ್ತೆ, ಆಂಜನೇಯ ಎಂದರೆ ಶಕ್ತಿ, ಶ್ರೀರಾಮ ಎಂದರೆ ಭಕ್ತಿ ಇವೆರಡೂ ಸೇರಿದರೆ ಗ್ರಾಮ ಸುಭಿಕ್ಷದ ಜೊತೆಗೆ ಬದುಕು ಪಾವನವಾಗುತ್ತದೆ ಎಂದು ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ ಶ್ರೀ ದ್ರೌಪದಿ ಆದಿಪರಾಶಕ್ತಿ ಮಹಾಸಂಸ್ಥಾನ ಪೀಠದ ಸದ್ಗುರು ಶ್ರೀ ಬಾಲಯೋಗಿ ಸಾಯಿ ಮಂಜುನಾಥ ಮಹಾರಾಜ್ ಸ್ವಾಮೀಜಿ ತಿಳಿಸಿದರು.