ಹವಾಮಾನ ವೈಪರೀತ್ಯದಿಂದ ಮಾವು ಬೆಳೆ ತಡರಾಮನಗರ: ಹವಾಮಾನ ಬದಲಾವಣೆ ಸರಿಯಾದ ರೀತಿಯಲ್ಲಿ ತೋಟಗಳ ನಿರ್ವಹಣೆ ಮಾಡದಿರುವುದು, ಮುಂಗಾರು ಮಳೆ ಕೊರತೆ, ಚಿಗುರಿನ ಪರಿಣಾಮದಿಂದ ಹಲವು ಕಡೆಗಳಲ್ಲಿ ಹೂ ವಿಳಂಬವಾಗುತ್ತಿದೆ. ಇದರಿಂದ ಫೆಬ್ರವರಿಯಲ್ಲಿ ಕಾಣಬೇಕಿರುವ ಹಣ್ಣು ಮಾರ್ಚ್, ಏಪ್ರಿಲ್ ವರೆಗೆ ವಿಸ್ತರಣೆ ಕಾಣುತ್ತಿದೆ ಎಂದು ಕೃಷಿ ವಿಜ್ಞಾನಿ ಡಾ. ರಾಜೇಂದ್ರ ಪ್ರಸಾದ್ ಹೇಳಿದರು.