ಪೌರಾಯುಕ್ತರಿಗೆ ತಿಳಿವಳಿಕೆ ನೀಡುವಂತೆ ಸದಸ್ಯೆ ದೂರುನಗರಸಭೆಯಲ್ಲಿ ಹಲವು ಲೋಪಗಳಿವೆ ಎಂಬುದರ ಕುರಿತು ಕನ್ನಡಪ್ರಭ ವರದಿ ಪ್ರಕಟಿಸಿದ ಬೆನ್ನಲ್ಲೆ 23ನೇ ವಾರ್ಡ್ ಸದಸ್ಯ ಜಯಮೇರಿ ಅವರು ಪೌರಾಡಳಿತ ನಿರ್ದೇಶಕರು, ಜಿಲ್ಲಾಧಿಕಾರಿಗೆ ಡಿ ಗ್ರೂಪ್ ನೌಕರರಿಗೆ ನೀಡಿರುವ ಹೊಣೆ ಸರಿಯಲ್ಲ, ಕೂಡಲೇ ಈ ಸಂಬಂಧ ನಗರಸಭೆ ಪೌರಾಯುಕ್ತರಿಗೆ ತಿಳಿವಳಿಕೆ ನೀಡಿ ಆದೇಶ ಹಿಂಪಡೆಯಲು ಸೂಚಿಸಿ ಎಂದು ಲಿಖಿತ ದೂರು ಸಲ್ಲಿಸಿರುವ ಘಟನೆ ಮಂಗಳವಾರ ನಡೆದಿದೆ.