ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚಲ್ಲ ಎಂದು ಹೊಂಗಳ್ಳಿ ಶಾಲೆ ಮಕ್ಕಳು ನಿರ್ಧಾರಗುಂಡ್ಲುಪೇಟೆಯ ಹೊಂಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲೆಯ ಪ್ರಾರ್ಥನಾ ಸಮಯದಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚದೆ ನೆಲ, ಜಲ, ಶಬ್ಧ, ವಾಯು ಮಾಲಿನ್ಯ ಮಾಡುವುದಿಲ್ಲ ಎಂದು ಶಪಥ ಮಾಡುವ ಮೂಲಕ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾದರಿಯಾಗಿದ್ದಾರೆ.