ನುಗು ವಲಯದಲ್ಲಿ ಹುಲ್ಲುಗಾವಲು ನೆಪದಲ್ಲಿ ಹಿಟಾಚಿ ಸದ್ದುರಾಜ್ಯದಲ್ಲಿ ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನುಗು ವಲಯದಲ್ಲಿ ಹುಲ್ಲುಗಾವಲು ನೆಪದಲ್ಲಿ ಜೆಸಿಬಿಗಳು ಮತ್ತು ಹಿಟಾಚಿಗಳನ್ನು ಬಳಸಿ ಪರಿಸರಕ್ಕೆ ವಲಯ ಅರಣ್ಯಾಧಿಕಾರಿ ಧಕ್ಕೆ ತಂದಿದ್ದಾರೆಯೇ?. ಹೌದು ಎನ್ನುತ್ತಿದೆ ನುಗು ವಲಯದಲ್ಲಿ ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳಿಂದ ಕಾಡಲ್ಲಿ ಬೆಳೆದು ನಿಂತರ ದಿಂಡಲ್, ಕಾರೆ, ಸೊಳ್ಳಿ ಮರಗಳನ್ನು ಬುಡ ಸಮೇತ ಕಿತ್ತು ಹಾಕುವ ಛಾಯ ಚಿತ್ರಗಳನ್ನು ಗಮನಿಸಬಹುದು.