ಬೆಣ್ಣೆಯ ಅಲಂಕಾರದಲ್ಲಿ ಕಂಗೊಳಿಸಿದ ನಾರಾಯಣಸ್ವಾಮಿ..!ಸಂಕ್ರಾಂತಿ ಹಬ್ಬದ ಹಿನ್ನೆಲೆ ಕೊಳ್ಳೇಗಾಲ ಪಟ್ಟಣದ ನಾರಾಯಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಕೈಂಕರ್ಯಗಳು ಸೋಮವಾರ ಬೆಳಗಿನಿಂದ ಸಂಜೆ ತನಕ ಜರುಗಿತು. ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದಲ್ಲಿ ಗರುಡಕಂಬ, ಆಂಜನೇಯ, ಗಣಪತಿ ಮೂರ್ತಿಗಳಿಗೆ ಸುಮಾರು 25 ಕೆಜಿಯಷ್ಟು ಬೆಣ್ಣೆಯಿಂದ ಅಲಂಕಾರ ಮಾಡಲಾಗಿದ್ದ ಹಿನ್ನೆಲೆ ನಾರಾಯಣಸ್ವಾಮಿ ಇನ್ನಿತರೆ ಮೂರ್ತಿಗಳು ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸುವಂತಿತ್ತು. ಸೌಮ್ಯನಾಯಕಿ ಮೂರ್ತಿಗೂ ವಿಶೇಷ ರೀತಿಯಲ್ಲಿ ಹೂವಿನ ಅಲಂಕಾರ ಮಾಡಲಾಗಿತ್ತು. ಸೋಮವಾರ ಬೆಳಗಿನ ಜಾವ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದಲ್ಲಿ 4:30 ರ ಸಮಯದಲ್ಲಿ ಸುಪ್ರಭಾತ ಸೇವೆ, ಅಭಿಷೇಕ ನಡೆಸಿ ಬೆಣ್ಣೆ ಅಲಂಕಾರ ಮಾಡಲಾಯಿತು. ಬಳಿಕ ಧರ್ನುಮಾಸದ ಸಮಾಪ್ತಿ ದೇವರಿಗೆ ಸಕ್ಕರೆ ಪೊಂಗಲ್ ನೈವೆಧ್ಯ ಹಾಗೂ ಬಂದ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು.