ಕಾನೂನು ಅರಿವಿನ ಜೊತೆಗೆ ಧಾರ್ಮಿಕ ಚಿಂತನೆ ಅಗತ್ಯ: ಶ್ರೀಧರ್ ಚಾಮರಾಜನಗರಪ್ರಸ್ತುತ ಸನ್ನಿವೇಶದಲ್ಲಿ ಸುಸಂಸ್ಕೃತರಾಗಲು ಕಾನೂನು ಅರಿವಿನ ಜೊತೆಗೆ ಧಾರ್ಮಿಕ ಚಿಂತನೆಗಳು ಅಗತ್ಯವಾಗಿದೆ ಎಂದು ಜಿಲ್ಲಾ ಉಚಿತ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ, ಕಾರ್ಯದರ್ಶಿ ಹಾಗೂ ಸತ್ರ ನ್ಯಾಯಾಧೀಶ ಎಂ. ಶ್ರೀಧರ್ ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜನಾರ್ಧನ ಪ್ರತಿಷ್ಠಾನದ ವತಿಯಿಂದ ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಾಧೀನ ಕೈದಿಗಳಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ಧಾರ್ಮಿಕ ಚಿಂತನೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹುಟ್ಟಿನಿಂದ ಸಾಯುವವರೆಗೂ ಮನುಷ್ಯ ಒಂದಲ್ಲ ಒಂದು ಕಾನೂನಿನ ಅಡಿ ಬದುಕಲೇ ಬೇಕು, ಈ ಕಾನೂನಿನ ಅರಿವಿನ ಜೊತೆಗೆ, ನಮ್ಮ ಸಾಂಸ್ಕೃತಿಕ ಪರಂಪರೆ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ನಾವು ಸುಸಂಸ್ಕೃತ ಜೀವನನದ ಜೊತಗೆ ಒಳ್ಳೆಯ ಸಮಾಜವನ್ನು ಕಟ್ಟಬಹುದು ಎಂದರು.