ಕಿಕ್ ಇಳಿಸುತ್ತಿರುವ ಮದ್ಯ: ವರ್ಷದಲ್ಲಿ ಎರಡು ಬಾರಿ ದರ ಏರಿಕೆಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡನೆಯಾಗುತ್ತಿದ್ದಂತೆ ಏಪ್ರಿಲ್ ತಿಂಗಳಲ್ಲಿ ಮದ್ಯದ ದರ ಏರಿಕೆ ಮಾಡುವುದು ಸಂಪ್ರದಾಯ. 2023-24ರ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹೊಸ ಬಜೆಟ್ ಮಂಡನೆಯಾಗುತ್ತಿದ್ದಂತೆ ಎಲ್ಲಾ ಮದ್ಯ ಮಾರಾಟ ಬೆಲೆಯನ್ನು ಸ್ಲ್ಯಾಬ್ ಆಧಾರದ ಮೇಲೆ ಸರಾಸರಿ ಶೇ. 20 ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಇದೀಗ ಜನವರಿ 1 ರಿಂದ ಅನ್ವಯವಾಗುವಂತೆ ಕೆಲವು ಮದ್ಯಗಳ ದರ ಮತ್ತೆ ಏರಿಕೆ ಮಾಡಲಾಗಿದೆ. ಮತ್ತೆ ಶೇ. 25 ರಷ್ಟು ಏರಿಕೆಯಾಗಿದೆ. ಒಟ್ಟಾರೆ, ಶೇ. 45 ರಷ್ಟು ದರ ಏರಿಕೆಯಾಗಿದೆ.