ಸಾಗುವಾನಿ, ಹೊನ್ನೆ ಮರಗಳು ಆಕಸ್ಮಿಕ ಬೆಂಕಿಗೆ ಆಹುತಿನರಸಿಂಹರಾಜಪುರ ಪಟ್ಟಣದ ಪ್ರವಾಸಿ ಮಂದಿರ ಸರ್ಕಲ್ ಬಳಿ ಕೂಡಿಟ್ಟಿದ್ದ ಸಾಗುವಾನಿ, ಹಲಸು, ಹೊನ್ನೆ ನಾಟದ ತುಂಡುಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಟ್ಟು ಹೋಗಿ ಲಕ್ಷಾಂತರ ರು. ನಷ್ಟ ಉಂಟಾಗಿದೆ. ಪಟ್ಟಣ ಪಂಚಾಯಿತಿ ಸದಸ್ಯ, ಜಿ.ಪಿ.ಟಿಂಬರ್ ಮಾಲೀಕ ಮುನಾವರ್ ಪಾಷಾ ಸಮೀಪದ ಜೆ.ಕೆ.ಶಾಮೀಲ್ ಮಿಲ್ಲಿನ ಪಕ್ಕದ ಜಾಗದಲ್ಲಿ ಸಾಗುವಾನಿ, ಹಲಸು ಹಾಗೂ ಹೊನ್ನೆ ನಾಟವನ್ನು ಸಂಗ್ರಹಿಸಿದ್ದರು.