ಕಮಲ ಪಡೆಗೆ ನೂತನ ಸಾರಥಿ ದೇವರಾಜ್ ಶೆಟ್ಟಿಎರಡು ದಶಕಗಳ ಕಾಲ ಜಿಲ್ಲೆಯಲ್ಲಿ ದರ್ಬಾರ್ ನಡೆಸಿರುವ ಬಿಜೆಪಿ ನೆಲಕಚ್ಚಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ದೇವರಾಜ್ ಶೆಟ್ಟಿ ನೇಮಕಗೊಂಡಿದ್ದಾರೆ.ಅಧ್ಯಕ್ಷರ ಆಕಾಂಕ್ಷಿಗಳ ಪಟ್ಟಿಯಲ್ಲಿ ದೇವರಾಜ್ ಶೆಟ್ಟಿ, ಪ್ರೇಮ್ಕುಮಾರ್, ರವೀಂದ್ರ ಬೆಳವಾಡಿ, ಕೋಟೆ ರಂಗನಾಥ್, ರಾಮಸ್ವಾಮಿ ಹೆಸರುಗಳಿದ್ದವು. ಕೊನೆಯ ಸುತ್ತಿನಲ್ಲಿ ಮೂರು ಮಂದಿಯ ಹೆಸರುಗಳಿದ್ದವು. ಇವುಗಳಲ್ಲಿ ದೇವರಾಜ್ ಶೆಟ್ಟಿ ಹೆಸರನ್ನು ಅಂತಿಮಗೊಳಿಸಲಾಗಿದೆ.