ಬ್ರಿಟಿಷ್ ಕಾಲದ ರಾಮ, ಸೀತಾ ನಾಣ್ಯಕ್ಕೆ ನಿತ್ಯ ಪೂಜೆಬಾಳೆಹೊನ್ನೂರಿನ ಮನೆಯಲ್ಲಿ ಬ್ರಿಟೀಷರ ಈಸ್ಟ್ ಕಂಪೆನಿ ಆಡಳಿತಾವಧಿಯಲ್ಲಿ ಚಲಾವಣೆಯಲ್ಲಿದ್ದ ಶ್ರೀರಾಮ, ಸೀತಾ ಚಿತ್ರದ ನಾಣ್ಯ ನಿತ್ಯ ಪೂಜೆಗೆ ಪಾತ್ರವಾಗಿದೆ. ಕ್ರಿ.ಶ.1818ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಭಾರತದಲ್ಲಿ ಚಲಾವಣೆಗೆ ತಂದಿದ್ದ ಈ ನಾಣ್ಯವನ್ನು ಪಟ್ಟಣದ ಹೋಬಳಿ ಜಾನಪದ ಪರಿಷತ್ ಅಧ್ಯಕ್ಷ ಸುನೀಲ್ರಾಜ್ ಭಂಡಾರಿ ಸಂಗ್ರಹಿದ್ದು, ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮನ ಚಿತ್ರದ ನಾಣ್ಯ ಇದಾಗಿದ್ದು, ಭಾರತ ಆಳಿದ ಬ್ರಿಟಿಷರು ಆಗಿನ ಕಾಲದಲ್ಲೇ ಇಂತಹ ನಾಣ್ಯಚಲಾವಣೆಗೆ ತರುವ ಮೂಲಕ ಭಾರತದ ಅಸ್ಮಿತೆ, ರಾಮಾಯಣದ ಐತಿಹ್ಯ ವನ್ನು ಜನರಿಗೆ ತಿಳಿಸುವ ಕಾರ್ಯ ಮಾಡಿರುವುದು ಗಮನಾರ್ಹ.