ಭೂ ವಿವಾದ: ಏಕಾಏಕಿ ಕಟ್ಟಡಗಳ ತೆರವುಚಿಕ್ಕಮಗಳೂರು, ನಗರದ ಹನುಮಂತಪ್ಪ ವೃತ್ತದಲ್ಲಿರುವ ನಲ್ಲೂರು ಮಠ ಮತ್ತು ಜಾಮಿಯಾ ಮಸೀದಿ ಸಮಿತಿ ನಡುವಿನ ವಿವಾದಿತ ಜಾಗದಲ್ಲಿರುವ ಅಂಗಡಿಗಳನ್ನು ಮಸೀದಿ ಸಮಿತಿ ಮಂಗಳವಾರ ಬೆಳಗ್ಗೆ ಏಕಾಏಕಿ ತೆರವಿಗೆ ಮುಂದಾಗಿ ಕಟ್ಟಡ ಮತ್ತು ಪೀಠೋಪಕರಣಗಳನ್ನು ಹಾನಿ ಪಡಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.