ಬಹುಮುಖ ಪ್ರತಿಭೆ ವಿದ್ವಾನ್ ಕೆ.ಎಸ್.ಭಾಸ್ಕರ ಭಟ್: ಪ್ರೊ. ಟಿ.ಎನ್.ಪ್ರಭಾಕರ್ರಾಜ್ಯ ಪ್ರಶಸ್ತಿ ಪುರಸ್ಕೃತರು, ಕವಿಕಿಶೋರ, ಸಾಹಿತ್ಯಭೂಷಣ, ಹಿರಿಯ ಸ್ವಾತಂತ್ರ್ಯ ಯೋಧರಾದ ವಿದ್ವಾನ್ ಕೆ.ಎಸ್.ಭಾಸ್ಕರ ಭಟ್ ಭೀಮನಕೋಣೆ ಅವರು ಬಹುಮುಖ ಪ್ರತಿಭೆ ಹೊಂದಿದ್ದರು ಎಂದು ತುರುವೇಕೆರೆ ಟಿ.ನಾರಾಯಣ ಶಾಸ್ತ್ರಿ ಪ್ರತಿಷ್ಠಾನದ ಪ್ರೊ.ಟಿ.ಎನ್.ಪ್ರಭಾಕರ್ ಹೇಳಿದ್ದಾರೆ.