ಅಜಾತ ಶತ್ರು ಮಡಬೂರು ರಾಜೇಂದ್ರ ನಿಧನ: ಸಾವಿರಾರು ಜನ ಅಂತ್ಯಕ್ರಿಯೆಯಲ್ಲಿ ಬಾಗಿನರಸಿಂಹರಾಜಪುರ, ಅಜಾತ ಶತ್ರು, ಮುತ್ಸದ್ದಿ ರಾಜಕಾರಣಿ, ಚಿಂತಕ ಮಡಬೂರು ರಾಜೇಂದ್ರ ( 70) ಭಾನುವಾರ ರಾತ್ರಿ ನಿಧನರಾದರು. ಅವರು ಪತ್ನಿ, ಒಬ್ಬ ಪುತ್ರ, 4 ಸಹೋದರಿಯರು, ಒಬ್ಬ ಸಹೋದರರನ್ನು ಅಗಲಿದ್ದಾರೆ. ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜೇಂದ್ರ ಅವರಿಗೆ ಭಾನುವಾರ ಸಂಜೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗದೆ ರಾತ್ರಿ ಮೃತಪಟ್ಟಿದ್ದಾರೆ.