ಕಲ್ಲುಗಣಿಗಾರಿಕೆ ಸ್ಪೋಟಕಗಳನ್ನು ನಿಯಮಾನುಸಾರ ಬಳಸಿ: ಡಿಸಿ ಮೀನಾ ನಾಗರಾಜ್ಗಣಿ ಸುರಕ್ಷತಾ ನಿರ್ದೇಶನಾಲಯ ಹಾಗೂ ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ವ್ಯಾಪ್ತಿಯ ಕಲ್ಲುಗಣಿ ಗುತ್ತಿಗೆ ಪ್ರದೇಶಗಳಿಗೆ ಸ್ಪೋಟಕಗಳ ವಿತರಣೆ, ಬಳಕೆ ಹಾಗೂ ಸಾಮಾನ್ಯ ಸುರಕ್ಷತೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಡಿಸಿ ಮೀನಾ ನಾಗರಾಜ್ ಕಲ್ಲು ಗಣಿ ಗುತ್ತಿಗೆಗಳಲ್ಲಿ ಬಳಸುವ ಸ್ಪೋಟಕಗಳನ್ನು ಡಿಜಿಎಂಎಸ್ ನಿಯಮಾನುಸಾರ ಬಳಕೆ ಮಾಡಿ ಕಲ್ಲು ಉತ್ಪನ್ನ ಗಳನ್ನು ಉತ್ಪಾದಿಸುವಂತೆ ಹೇಳಿದರು.