ಕಾಫಿ ನಾಡಲ್ಲಿ ಗಾರ್ಮೆಂಟ್ ಉದ್ಯಮಕ್ಕೆ ಶುಕ್ರ ದೆಸೆಕಾಫಿಯ ನಾಡಲ್ಲಿ ಗಾರ್ಮೆಂಟ್ ಸ್ಥಾಪನೆ. - ಇದು, ರಾಜ್ಯ ಸರ್ಕಾರದ 2024-25ರ ರ ಬಜೆಟ್ ಘೋಷಣೆ ಅಲ್ಲ. ಆದರೆ, ಸದ್ದಿಲ್ಲದೆ ಗಾರ್ಮೆಂಟ್ ಉದ್ಯಮ ಜಿಲ್ಲೆಯಲ್ಲಿ ಜನ್ಮ ತಾಳುತ್ತಿದೆ. ಅಂದುಕೊಂಡಂತೆ ಚುರುಕಾಗಿ ಕಾಮಗಾರಿ ನಡೆದರೆ ಈ ವರ್ಷದಲ್ಲೇ ಸುಮಾರು 8 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಬೆಂಗಳೂರು, ಅರಸೀಕೆರೆ, ತುಮಕೂರುಗಳ ಗಾರ್ಮೆಂಟ್‌ಗಳಲ್ಲಿ ಕೆಲಸ ಮಾಡಲು ವಲಸೆ ಹೋಗಿರುವವರಿಗೆ ನಮ್ಮ ಜಿಲ್ಲೆಯಲ್ಲಿಯೇ ಉದ್ಯೋಗ ಸಿಗಲಿದೆ.