ಕಾಫಿ ನಾಡಿನಲ್ಲಿ ಮುಂದುವರಿದ ಮಳೆ: ಐದು ಕುಟುಂಬಗಳು ಸ್ಥಳಾಂತರಚಿಕ್ಕಮಗಳೂರು, ಕಾಫಿಯ ನಾಡಿನಲ್ಲಿ ಮಂಗಳವಾರವೂ ಮಳೆ ಮುಂದುವರಿದಿತ್ತು. ಆದರೆ, ಅಬ್ಬರದ ಪ್ರಮಾಣ ಇಳಿಮುಖವಾಗಿತ್ತು. ಮಲೆನಾಡಿನ ತಾಲೂಕುಗಳಾದ ಶೃಂಗೇರಿ, ಕಳಸ, ಕೊಪ್ಪ ಹಾಗೂ ಮೂಡಿಗೆರೆಯಲ್ಲಿ ಎಂದಿನಂತೆ ಮಳೆ ಮುಂದುವರೆದಿತ್ತು. ಆದರೆ, ಚಿಕ್ಕಮಗಳೂರು, ಎನ್.ಆರ್.ಪುರ ತಾಲೂಕುಗಳಲ್ಲಿ ಮಳೆಯ ಸ್ವಲ್ಪಮಟ್ಟಿಗೆ ಇಳಿಮುಖವಾಗಿತ್ತು. ಮಧ್ಯಾಹ್ನದ ನಂತರ ಆಗಾಗ ಬಿಸಿಲು ಕಂಡು ಬಂದಿತು. ಬಯಲುಸೀಮೆ ತಾಲೂಕುಗಳಾದ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ಗಳಲ್ಲಿ ಮೋಡ ಕವಿದ ವಾತಾವರಣದ ನಡುವೆ ಆಗಾಗ ತುಂತುರು ಮಳೆ ಬರುತ್ತಿತ್ತು. ಬೆಳಿಗ್ಗೆಯಿಂದ ಸಂಜೆವರೆಗೆ ಇದೇ ಪರಿಸ್ಥಿತಿ ಮುಂದುವರಿದಿತ್ತು.