ಅಪಾಯದಂಚಿನಲ್ಲಿದೆ ಶೃಂಗೇರಿಯ ಮೆಣಸೆ ಸೇತುವೆ ಶೃಂಗೇರಿ ಸುಣ್ಣಬಣ್ಣ ವಿರಲಿ, ದುರಸ್ತಿಯನ್ನು ಕಾಣದೇ ದಶಕಗಳೇ ಕಳೆದ ಈ ಸೇತುವೆ ಮೇಲೆಯೇ ಹೊಂಡಗುಂಡಿಗಳ ಲೆಕ್ಕವಿಲ್ಲ.ಆಗಾಗ ಅಪಘಾತಗಳು ಸಂಭವಿಸುತ್ತಾ ಅಪಘಾತ ವಲಯವಾಗಿ ಪರಿಣಮಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ, ಜನಪ್ರತಿನಿದಿಗಳು, ಸರ್ಕಾರದ ನಿರ್ಲಕ್ಷ್ಯ ಮಾತ್ರ ಮುಂದುವರಿದಿದೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.