ದೇವಾಲಯಕ್ಕೆ ಜಾಗ ನೀಡದ ವಿವಾದ: ಶೆಡ್‌ಗೆ ಬೆಂಕಿ ಹಾಕಿದ ಕಿಡಿಗೇಡಿಗಳುಬೀರೂರು, ದೇವಾಲಯಕ್ಕೆ ಜಾಗ ನೀಡಲಿಲ್ಲವೆಂಬ ಕಾರಣಕ್ಕೆ ಮಿನಿ ಟ್ರಾಕ್ಟರ್, ಮೋಟಾರು, ಕೇಬಲ್, ಹುಲ್ಲಿನ ಬವಣೆ ಹಾಗೂ 3 ಸಾವಿರ ಕೊಬ್ಬರಿ ಇದ್ದ ಶೆಡ್ಡಿಗೆ ಗ್ರಾಮದ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ 20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.