ಮಲೆನಾಡಿಗೆ ಕಂಟಕವಾಗಿದೆ ಭೂಮಿ, ಗುಡ್ಡ ಕುಸಿತ ಶೃಂಗೇರಿ, ಕೇರಳದ ವಯನಾಡು, ಉತ್ತರ ಕನ್ನಡ, ಕೊಡಗು, ದಕ್ಷಿಣ ಕನ್ನಡ, ಚಾರ್ಮಡಿ ಘಾಟ್, ಆಗುಂಬೆ ಘಾಟ್, ಶಿರಾಡಿ ಘಾಟ್ ಸೇರಿದಂತೆ ಹಲವೆಡೆ ಭೂಕುಸಿತ, ಗುಡ್ಡಕುಸಿತದ ಘಟನೆಗಳು ನಡೆದಿದೆ. ಆದರೆ ಮಲೆನಾಡಿನಲ್ಲಿಯೂ ಕಳೆದ ವರ್ಷದಿಂದ ಭಾರೀ ಮಳೆಗೆ ಅಲ್ಲಲ್ಲಿ ರಸ್ತೆ ಕುಸಿತ, ಭೂಕುಸಿತಗಳು ಆರಂಭಗೊಂಡಿದ್ದು ರಸ್ತೆ, ಮನೆ, ಸೇತುವೆಗಳು ಅಪಾಯದಂಚಿಗೆ ಸಿಲುಕಿ ಸ್ಥಳಿಯ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ.