ಅಭಿವೃದ್ಧಿ ಕಾರ್ಯಗಳಿಗೆ ಯಾರ ಅರ್ಜಿಯೂ ಬೇಕಿಲ್ಲ: ಶಾಸಕ ಡಾ.ಎಂ.ಚಂದ್ರಪ್ಪಇಡೀ ಕ್ಷೇತ್ರದಲ್ಲಿನ ಅಭಿವೃದ್ಧಿಗೆ ಯಾವುದಾದರೂ ಗ್ರಾಮದ ಜನರು ನನಗೆ ಮನವಿ ಸಲ್ಲಿಸಿದ್ದೀರಾ? ಹೇಳಿ, ಯಾರಾದರೂ ಮನವಿ ಮಾಡಿದ್ದೀರಾ? ಎಂಬ ಪ್ರಶ್ನೆ ಮಾಡಿದ ಶಾಸಕ ಡಾ.ಎಂ.ಚಂದ್ರಪ್ಪ, ನಾನು ಯಾರಿಂದಲೂ ಯಾವ ಅರ್ಜಿಯನ್ನಾಗಲೀ, ಮನವಿಯನ್ನಾಗಲೀ ನಿರೀಕ್ಷೆ ಮಾಡಿಲ್ಲ. ಎಲ್ಲರ ಅಭಿವೃದ್ಧಿಯೇ ನನ್ನ ಗುರಿ ಎಂಬ ಭಾವನೆಯಿಂದ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.