ಮಾದಕ ದ್ರವ್ಯದತ್ತ ಯುವ ಸಮುದಾಯ ಒಲವು ವಿಷಾದನೀಯ: ಆಂಜನೇಯ ರೆಡ್ಡಿಪುತ್ತೂರು ನಗರ ಪೊಲೀಸ್ ಠಾಣೆ, ಪುತ್ತೂರು ಸಂಚಾರಿ ಪೊಲೀಸ್ ಠಾಣೆ, ಅಮರ್ ಅಕ್ಟರ್ ಅಂತೋನಿ ಕ್ರಿಕೆಟ್ ಸಂಘಟಕರು, ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಪುತ್ತೂರಿನ ಬಸ್ಸು ನಿಲ್ದಾಣದ ಸಮೀಪದ ಗಾಂಧೀಕಟ್ಟೆಯ ಬಳಿ ಗುರುವಾರ ಸಂಜೆ ‘ಮಾದಕ ದ್ರವ್ಯ ಅಳಿಸಿ-ನಮ್ಮೂರ ಉಳಿಸಿ’, ‘ನಮ್ಮ ಜೀವ-ನಮ್ಮ ರಕ್ಷಣೆ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಮಾದಕ ದ್ರವ್ಯ ಮುಕ್ತ ಪುತ್ತೂರು, ಸಂಚಾರಿ ನಿಯಮಗಳ ಜನ ಜಾಗೃತಿ ಕಾರ್ಯಕ್ರಮ ನಡೆಯಿತು.