ಸರ್ಕ್ಯೂಟ್ ಹೌಸ್- ಬಿಜೈ ಚರ್ಚ್ ಜಂಕ್ಷನ್ ರಸ್ತೆಗೆ ಜಾರ್ಜ್ ಫರ್ನಾಂಡಿಸ್ ನಾಮಕರಣಈ ರಸ್ತೆಗೆ ಜಾರ್ಜ್ ಫರ್ನಾಂಡಿಸ್ ಹೆಸರಿಡಲು ಕೊಂಕಣಿ ಲೇಖಕರ ಸಂಘದ ರಿಚರ್ಡ್ ಮೊರಾಸ್ ಸೇರಿದಂತೆ ಸಾರ್ವಜನಿಕರು ಮನವಿ ಮಾಡಿದ್ದರು. ಜಯಾನಂದ ಅಂಚನ್ ಮೇಯರ್ ಆಗಿದ್ದಾಗ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಅಜೆಂಡಾ ಇರಿಸಿ, ನಿರ್ಣಯ ಮಾಡಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಈ ಬಗ್ಗೆ ಪತ್ರ ಸಲ್ಲಿಕೆಯಾಗಿತ್ತು. ಇದೀಗ ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ಮೇಯರ್ ಹೇಳಿದರು.