ಭ್ರಷ್ಟರ ಸಿಂಹಸ್ವಪ್ನ ಎಸ್ಪಿಗೆ ವರ್ಷದಿಂದ ಸಿಗದ ಹುದ್ದೆ!ವರ್ಷದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಲೋಕಾಯುಕ್ತ ಎಸ್ಪಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಲೋಕಸಭಾ ಚುನಾವಣೆ ಮುನ್ನ ಸ್ವಂತ ಜಿಲ್ಲೆ ಎಂಬ ಕಾರಣ ನೀಡಿ ಸೈಮನ್ ಅವರನ್ನು ವರ್ಗಾಣೆಗೊಳಿಸಿದ ಸರ್ಕಾರವು, ಅನಂತರ ಯಾವುದೇ ಹುದ್ದೆ ನೀಡಿಲ್ಲ. 2000ದಲ್ಲಿ ರಾಜ್ಯ ಅಪರಾಧ ತನಿಖಾ ಇಲಾಖೆಗೆ ಡಿಟೆಕ್ಟಿವ್ ಸಬ್ ಇನ್ಸ್ಪೆಕ್ಟರ್ ಆಗಿ ಸೈಮನ್ ನೇಮಕ ಗೊಂಡಿದ್ದರು. ಆನಂತರ ಸೇವಾ ಜೇಷ್ಠತೆ ಆಧರಿಸಿ ಹಂತ ಹಂತವಾಗಿ ಮುಂಬಡ್ತಿ ಆಗಿ ಪ್ರಸ್ತುತ ಎಸ್ಪಿ ಆಗಿದ್ದಾರೆ. ಹಲವು ವರ್ಷಗಳು ಸಿಐಡಿಯಲ್ಲಿ ಕಾರ್ಯನಿರ್ವಹಿಸಿದ್ದ ಅವರನ್ನು ಲೋಕಾಯುಕ್ತ ಸಂಸ್ಥೆಗೆ ಕಳೆದ ಸರ್ಕಾರದ ಅವಧಿಯಲ್ಲಿ ವರ್ಗಾವಣೆ ಮಾಡಲಾಗಿತ್ತು.