ಅನಾಮಿಕ ತೋರಿಸಿದ ಇನ್ನೊಂದು ಜಾಗದಲ್ಲೂ ಶೋಧ: ಅಸ್ಥಿ ಸುಳಿವಿಲ್ಲಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂಬ ಅನಾಮಿಕ ಸಾಕ್ಷಿದಾರನ ಆರೋಪಗಳ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ ಇನ್ನೊಂದು ಸ್ಥಳದಲ್ಲಿ ಉತ್ಖನನ ನಡೆಸಿತು. ಆದರೆ, ಯಾವುದೇ ಕುರುಹು ಪತ್ತೆಯಾಗಿಲ್ಲ.