ಇಂದು ಪುತ್ತಿಗೆ ಸೋಮನಾಥೇಶ್ವರ ದೇಗುಲ ಬ್ರಹ್ಮಕಲಶೋತ್ಸವಬೆಳಗ್ಗೆ 7.37ಕ್ಕೆ ಶ್ರೀ ಸೋಮನಾಥೇಶ್ವರ ಹಾಗೂ ಶ್ರೀ ಮಹಿಷಮರ್ಧಿನಿ ಅಮ್ಮನವರಿಗೆ ಬ್ರಹ್ಮಕಲಶಾಭಿಷೇಕವು ಎಡಪದವು ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿದೆ. ನ್ಯಾಸ ಪೂಜೆ, ಪ್ರತಿಜ್ಞಾ ವಿಧಿ, ಮಹಾಪೂಜೆ, ಪಲ್ಲಪೂಜೆಯಾಗಿ ಮಹಾಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತಸರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕುಲದೀಪ ಎಂ. ತಿಳಿಸಿದ್ದಾರೆ.