ಮಾದರಿ ಟರ್ಫ್ ಅಂಕಣ ನಿರ್ಮಾಣಕ್ಕೆ ಆದ್ಯತೆ: ಬಕ್ಕೇಶ್ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ದಾವಣಗೆರೆಯಲ್ಲಿ ವ್ಯವಸ್ಥಿತ ಕ್ರೀಡಾಂಗಣ ಆಗಬೇಕೆಂಬ ಕನಸು ಸಾಕಾರಗೊಳ್ಳುತ್ತಿದೆ. ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ನಿರ್ಮಾಣ ಹಂತದ ಮೈದಾನದ ಪಕ್ಕದಲ್ಲೇ ಇರುವ ಜಾಗವನ್ನು ಕ್ಲಬ್ ಹೌಸ್ ನಿರ್ಮಿಸಲು ಮಂಜೂರು ಮಾಡುವಂತೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಬಳಿ ಚರ್ಚಿಸಲಾಗುವುದು ಎಂದು ಸಂಸ್ಥೆ ತುಮಕೂರು ವಲಯ ಅಧ್ಯಕ್ಷ, ಜಿಲ್ಲಾ ಪರಿಷತ್ತು ಮಾಜಿ ಅಧ್ಯಕ್ಷ ಎಸ್.ಎಸ್. ಬಕ್ಕೇಶ್ ಹೇಳಿದ್ದಾರೆ.