ಕ್ರೀಡೆಗಳಿಂದ ಸಾಧನೆ ತೋರಿ: ಡಾ.ಶಂಕಪಾಲ್ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಭವ್ಯ ಭವಿಷ್ಯಕ್ಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡರಲ್ಲೂ ನಿಮ್ಮ ಭವಿಷ್ಯ ಅಡಗಿದೆ. ಪಠ್ಯದ ಮುಖೇನ ಜ್ಞಾನ ಪಡೆದರೆ, ಕ್ರೀಡೆಯಂಥ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭೆ ಪ್ರದರ್ಶಿಸಿ, ಸಾಧನೆ ಮಾಡಬಹುದು ಎಂದು ಜಿ.ಎಂ. ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ದಾವಣಗೆರೆಯಲ್ಲಿ ಹೇಳಿದ್ದಾರೆ.