ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಕೇಂದ್ರ ಮಧ್ಯ ಪ್ರವೇಶಿಸಲಿನೆರೆಯ ಬಾಂಗ್ಲಾ ದೇಶದಲ್ಲಿ ವಾಸವಿರುವ ಎಲ್ಲ ಹಿಂದೂಗಳನ್ನು ರಕ್ಷಿಸಿ, ಅವರಿಗೆ ಜೀವ ಭದ್ರತೆ ಒದಗಿಸಬೇಕು. ಹಿಂದೂ ಕುಟುಂಬಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಅಲ್ಲಿನ ಭಯೋತ್ಪಾದಕರ ವಿರುದ್ದ ಕೂಡಲೇ ಕ್ರಮ ಜರುಗಿಸಬೇಕು. ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ, ಹಿಂದೂಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಹಿಂದೂ ಹಿತರಕ್ಷಣಾ ಸಮಿತಿ ಪ್ರಮುಖರು ಹೊನ್ನಾಳಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.