10 ಕೆಜಿ ಗಾಂಜಾ ಜಪ್ತಿ: ಒರಿಸ್ಸಾ ಮೂಲದ ಇಬ್ಬರು ಸೇರಿ 3 ಬಂಧನಅಕ್ರಮವಾಗಿ ಗಾಂಜಾ ಸಂಗ್ರಹಿಸಿ, ಮಾರಾಟ ಮಾಡುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿದ ಪೊಲೀಸರು ರೈಲ್ವೆ ಹಳಿಗಳ ಕಾಮಗಾರಿ ಕೆಲಸಕ್ಕೆಂದು ಬಂದು, ಗಾಂಜಾವನ್ನೂ ತಂದಿದ್ದ ಒರಿಸ್ಸಾ ಮೂಲದ ಇಬ್ಬರು ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ₹10 ಲಕ್ಷ ಮೌಲ್ಯದ 10 ಕೆಜಿ ಗಾಂಜಾ, 1 ಬೈಕ್ ಜಪ್ತಿ ಮಾಡಿರುವ ಘಟನೆ ಹರಿಹರ ನಗರದಲ್ಲಿ ನಡೆದಿದೆ.