ಅಧಿಕಾರ ದುರುಪಯೋಗ ಖಂಡಿಸಿ ಗ್ರಾಪಂಗೆ ಮುತ್ತಿಗೆದಿದ್ದಿಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುತ್ಯಮ್ಮ ಅವರ ಪುತ್ರ ರೇವಣಸಿದ್ದಪ್ಪ, ತಾನು ರೈತ ಸಂಘದ ಅಧ್ಯಕ್ಷ, ನಮ್ಮಮ್ಮ ಗ್ರಾಪಂ ಅಧ್ಯಕ್ಷೆ ಎಂದು ಹೇಳಿಕೊಂಡು, ಸಾರ್ವಜನಿಕ ಆಸ್ತಿಯಾದ ಹುಚ್ಚಂಗಿಪುರ ಗ್ರಾಮದ ಸಂತೆ ಮೈದಾನದಲ್ಲಿ ೧೦೦ * ೭೦ ಅಡಿ ಅಳತೆಯಷ್ಟು ಜಾಗಕ್ಕೆ ಇ-ಸ್ವತ್ತು ಮಾಡಿಕೊಂಡಿದ್ದಾರೆ. ಇದರಿಂದ ಗ್ರಾಪಂ ಅಧಿಕಾರ ದುರುಪಯೋಗ ಆಗಿದೆ ಎಂದು ಆರೋಪಿಸಿ ಹುಚ್ಚಂಗಿಪುರ ಗ್ರಾಮಸ್ಥರು ದಿದ್ದಿಗಿ ಗ್ರಾಪಂಗೆ ಸೋಮವಾರ ಬೀಗ ಜಡಿದು ಪ್ರತಿಭಟಿಸಿದ್ದಾರೆ.