ಚನ್ನಗಿರಿ ಹಾಲಸ್ವಾಮಿ ಮಠದಲ್ಲಿ ಶ್ರಾವಣ ಮಾಸದ ವಚನಾಮೃತ ಕಾರ್ಯಕ್ರಮಚನ್ನಗಿರಿ ಪಟ್ಟಣದ ಶ್ರೀ ಹಾಲಸ್ವಾಮಿ ವಿರಕ್ತ ಮಠದಲ್ಲಿ ಶ್ರಾವಣ ಮಾಸದ ವಚನಾಮೃತ ಬೋಧನೆ ಪ್ರವಚನ ಕಾರ್ಯಕ್ರಮ ಹಾಗೂ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳ, ಶ್ರೀ ಹಾಲಸ್ವಾಮೀಜಿ ಸಂಸ್ಮರಣೋತ್ಸವ, ಶ್ರೀ ನೀಲಕಂಠ ಮಹಾಸ್ವಾಮೀಜಿ 40ನೇ ವರ್ಷದ ಸಂಸ್ಮರಣೆ ಮತ್ತು ಶ್ರೀ ಜಯದೇವ ಮಹಾಸ್ವಾಮಿ ಚತುರ್ಥ ಸಂಸ್ಮರಣೋತ್ಸವ, ಶ್ರೀ ಬಸವತತ್ವ ಸಮಾರಂಭವು ಆ.5ರಿಂದ ಸೆ.3ರವರೆಗೆ ಪ್ರತಿದಿನ ಸಂಜೆ 6.30ರಿಂದ 8.30 ಗಂಟೆವರೆಗೆ ಶ್ರೀ ಹಾಲಸ್ವಾಮಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಶ್ರೀ ಮಠದ ಡಾ.ಶ್ರೀ ಬಸವ ಜಯಚಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ.