ಗಾಯತ್ರಿ ಸಿದ್ದೇಶ್ವರರ ಸದಸ್ಯತ್ವ ಅಭಿಯಾನ ಕೇವಲ ಪ್ರಚಾರದ ಗೀಳುಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನಲ್ಲಿ ಮಂಡಲದ ಅಧ್ಯಕ್ಷರ ಗಮನಕ್ಕೆ ತಾರದೇ ಗಾಯತ್ರಿ ಸಿದ್ದೇಶ್ವರ ಅವರು ಕೆಲವರೊಂದಿಗೆ ಸೇರಿ ತಾನೂ ಕೂಡ ತಾಲೂಕಿನ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸುತ್ತಿರುವುದಾಗಿ ರಾಜ್ಯ ನಾಯಕರಿಗೆ ತೋರಿಸಿಕೊಡುವ ನಾಟಕವಾಡುತ್ತಿದ್ದಾರೆ ಎಂದು ಹೊನ್ನಾಳಿ ಮಂಡಲ ಅಧ್ಯಕ್ಷ ಜೆ.ಕೆ. ಸುರೇಶ್ ಹೇಳಿದರು.