ಬಿಜೆಪಿ ಕಟ್ಟಲು ಶ್ರಮಿಸಿದವರೇ ಹೊರ ಜಿಲ್ಲೆಯವರಾ?: ಶಾಸಕ ಬಿ.ಪಿ.ಹರೀಶ, ಯಶವಂತರಾವ್ ಜಾಧವ್ಸಿದ್ದೇಶ್ವರ ಆಯ್ಕೆಯನ್ನು ಕೇಂದ್ರ ನಾಯಕರು ಮಾಡುತ್ತಾರೆಯೇ ಹೊರತು ರಾಜ್ಯ, ಜಿಲ್ಲಾ ನಾಯಕರಲ್ಲ. ಹಾಗಾಗಿ ರೇಣುಕಾಚಾರ್ಯ ಇತರರಿಗೆ ಏನಾದರೂ ಅಸಮಾಧಾನವಿದ್ದರೆ ಕೇಂದ್ರ ನಾಯಕರ ಬಳಿ ಹೇಳಬೇಕೆ ಹೊರತು, ಮಾಧ್ಯಮ, ಹಾದಿ ಬೀದಿಗಳಲ್ಲಿ ಅಲ್ಲ. ರೇಣುಕಾಚಾರ್ಯ ಸಿಎಂ, ಡಿಸಿಎಂ, ಸಚಿವರ ಮನೆಗಳ ಬಾಗಿಲಿಗೆ ಹೋಗುವುದು, ಕಾಂಗ್ರೆಸ್‌ನ ನಾಯಕರೊಂದಿಗೆ ಚರ್ಚಿಸುವುದು ಕಂಡರೆ, ರೇಣುಕಾಚಾರ್ಯ ಯಾರ ಪರ ಕೆಲಸ ಮಾಡುತ್ತಿದ್ದಾರೆಂದು ಮೇಲ್ನೋಟಕ್ಕೆ ಸ್ಪಷ್ಟವಿದೆ.