ಭದ್ರಾ ಮೇಲ್ಡಂಡೆಗೆ ಒತ್ತಾಯಿಸಿ ಜಗಳೂರು ಬಂದ್ ಯಶಸ್ವಿಭದ್ರಾ ಮೇಲ್ದಂಡೆ, 57 ಕೆರೆ ತುಂಬುವ ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಪಟ್ಟಣದಲ್ಲಿ ಶನಿವಾರ ನಡೆಸಿದ ಸ್ವಯಂ ಪ್ರೇರಿತ ಬಂದ್ ಶಾಂತಯುತವಾಗಿ ಸಂಪೂರ್ಣಗೊಂಡಿತು. ಸಂಜೆ ಮಳೆರಾಯ ಆಗಮಿಸುವ ಮೂಲಕ ಬಂದ್‌ಗೆ ಯಶಸ್ವಿಯಾಗಿ ತೆರೆ ಎಳೆಯಲಾಯಿತು. ಜಗಳೂರು ಪಟ್ಟಣಕ್ಕೆ ಆಗಮಿಸುವ ನಾಲ್ಕು ದಿಕ್ಕುಗಳಲ್ಲಿ ಹೋರಾಟಗಾರರು ರಸ್ತೆಗಳಿಗೆ ವಿವಿಧ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟನೆ ಮಾಡಿದರು.