ನಾಳೆ ಜಗಳೂರು ಬಂದ್ಜಗಳೂರು ತಾಲೂಕಿಗೆ ಸಮಗ್ರ ನೀರಾವರಿ ಯೋಜನೆ ಜಾರಿ ವಿಚಾರವಾಗಿ ಆಳ್ವಿಕೆ ಮಾಡಿದ ನಾಯಕರು ರೈತರ ಮೂಗಿಗೆ ತುಪ್ಪ ಸವರಿ ತಮ್ಮ ಬೇಳೆ ಬೇಯಿಸಿಕೊಂಡರು. ಈಗಲಾದರೂ ಭದ್ರಾ ಮೇಲ್ದಂಡೆ, 57 ಕೆರೆ ತುಂಬುವ ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಏ.13ರಂದು ಕರೆ ನೀಡಿರುವ ಸ್ವಯಂಪ್ರೇರಿತ, ಶಾಂತಿಯುತ ಬಂದ್‌ಗೆ ಕೈ ಜೋಡಿಸಿ ಎಂದು ಹೋರಾಟಗಾರ, ಸಾಹಿತಿ ಡಾ.ಯಾದವ ರೆಡ್ಡಿ ಜಗಳೂರಲ್ಲಿ ಮನವಿ ಮಾಡಿದ್ದಾರೆ.