ತಗಡಿನ ಶೆಡ್ಡಿನ ಬಿಆರ್‌ಟಿಎಸ್ ತಂಗುದಾಣ; ಬಿಸಿಲ ಬೇಗೆಯಲ್ಲಿ ಸಿಬ್ಬಂದಿಹುಬ್ಬಳ್ಳಿ ಹಳೇ ಬಸ್ ನಿಲ್ದಾಣದ ಎದುರಿಗಿದ್ದ ಬಿಆರ್‌ಟಿಎಸ್ ಬಸ್ ನಿಲ್ದಾಣ ತೆರವುಗೊಳಿಸಿ ಈಗ ಇಂದಿರಾ ಗಾಜಿನ ಮನೆಗೆ ತೆರಳುವ ವೃತ್ತದ (ಬಸವವನ) ಬಳಿ ತಾತ್ಕಾಲಿಕವಾಗಿ ತಗಡಿನ ಶೆಡ್ ನಿರ್ಮಾಣ ಮಾಡಿದ್ದು, ಬಿಸಿಲಿನ ತೊಂದರೆಯಿಂದಾಗಿ ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.