ಮಾವಿನಕೆರೆಯ ವೆಂಕಟರಮಣಸ್ವಾಮಿಗೆ ಏಕಾದಶಿ ಪೂಜೆಮಾವಿನಕೆರೆ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನ, ಪಟ್ಟಣದ ಶ್ರೀ ದೇವಾಂಗ ಶ್ರೀ ರಾಮಮಂದಿರ, ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯ, ದಾಸಗೌಡರ ಬೀದಿಯ ಲಕ್ಷ್ಮೀ ವೆಂಕಟೇಶ್ವರ ದೇವಾಲಯ ಹಾಗೂ ರಾಯರಾವುತ್ತರ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಶುಕ್ರವಾರ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು. ಪ್ರಾಕಾರೋತ್ಸವ ನಂತರ ದೇವಾಲಯ ಪ್ರಾಂಗಣದಲ್ಲಿ ನಿರ್ಮಿಸಿರುವ ವೈಕುಂಠದ್ವಾರದ ಮೇಲೆ ಶ್ರೀಸ್ವಾಮಿ ಉತ್ಸವ ಮೂರ್ತಿಯನ್ನಿಟ್ಟು, ವಿಶೇಷವಾಗಿ ಅಲಂಕರಿಸಿ, ಮಹಾ ಮಂಗಳಾರತಿ ನೆರವೇರಿಸಿ, ಭಕ್ತರು ವೈಕುಂಠದ್ವಾರದಲ್ಲಿ ಸಾಗಲು ಅವಕಾಶ ಕಲ್ಪಿಸಲಾಯಿತು.