ಆರೋಗ್ಯವಂತರು ರಕ್ತದಾನ ಮಾಡಿ ಜೀವ ಉಳಿಸಬಹುದುಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ ಜನರ ಜೀವ ಉಳಿಸಬಹುದು ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು ಎಚ್.ಎಸ್. ಶಂಕರ್ ತಿಳಿಸಿದರು. ರಾಮನಾಥಪುರ ಹೋಬಳಿ ಶಾಸಕರ ಸ್ವಗ್ರಾಮ ಹನ್ಯಾಳು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಕೆಂಪೇಗೌಡರ ಜನ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರವನ್ನು ಇಂಡಿಯಾನಾ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿತ್ತು. ಹೃದ್ರೋಗ, ಕೀಲುಮೂಳೆ, ಕಣ್ಣು ತಪಾಸಣೆ, ಇ.ಸಿ.ಜಿ. ಬಿ.ಪಿ. ಶುಗರ್ ಮುಂತಾದ ಕಾಯಿಲೆ ಹಾಗೂ ಸುಮಾರು 250 ಕ್ಕೂ ಹೆಚ್ಚು ಜನ ಹೃದಯ ತಪಾಸಣೆ ನಡೆಯಿತು ಹಾಗೂ ಸುಮಾರು 25 ಯೂನಿಟ್ ರಕ್ತದಾನವನ್ನು ಜನರು ನೀಡಿದರು.