ಪ್ರಕೃತಿ ಏರುಪೇರಿನ ಬಗ್ಗೆ ಸಾಹಿತ್ಯ ಕ್ಷೇತ್ರವೂ ಗಮನಹರಿಸುತ್ತಿಲ್ಲನಾಳಿನ ಆತಂಕಗಳ ಬಗ್ಗೆ ಅತಿವೃಷ್ಟಿ, ಸುಂಟರಗಾಳಿ, ಕಾಳ್ಗಿಚ್ಚು, ಹಿಮ ಕುಸಿತ, ಬರಗಾಲ ರೂಪದಲ್ಲಿ ಭೂಮಿಯೇ ಮಾತನಾಡುತ್ತಿದ್ದರೂ, ಕೇಳಿಸಿಕೊಳ್ಳುವ ವ್ಯವಧಾನ ಯಾರಿಗೂ ಇಲ್ಲವಾಗಿದೆ ಎಂದು ಹಿರಿಯ ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಕಳವಳ ವ್ಯಕ್ತಪಡಿಸಿದರು. ಸಾಹಿತ್ಯ ವಲಯವೂ ಈ ಬಗ್ಗೆ ಚಿತ್ತ ಹರಿಸಿಲ್ಲ. ವಾತಾವರಣ ಬದಲು, ಹವಾಗುಣದ ಬಗ್ಗೆ ಕತೆ, ಕಾದಂಬರಿ ಬರೆದಿಲ್ಲ. ಗ್ರಾಮೀಣ, ನಗರ ಹೀಗೆ ಎರಡು ಕತ್ತಲೆ ಮಧ್ಯೆ ಬದುಕುತ್ತಿರುವ ನಾವು ಎಚ್ಚೆತ್ತುಕೊಳ್ಳಬೇಕಿದೆ. ಮತ್ತೊಂದು ವಿಪರ್ಯಾಸ ಎಂದರೆ, ಭೂಮಿ ಇಷ್ಟೊಂದು ಸಂಕಟ ಪಡುತ್ತಿದ್ದರೂ, ಅಧಿಕಾರಿಗಳಾಗಲೀ, ರಾಜಕಾರಣಿಗಳಾಗಲೀ ಮಾತನಾಡುತ್ತಿಲ್ಲ ಎಂದು ಬೇಸರ ಹೊರಹಾಕಿದರು.